Deepavali : Chief Minister greets people of the State

By the People & For the People
Deepavali : Chief Minister greets people of the State

ಬೆಂಗಳೂರು, ಅಕ್ಟೋಬರ್ 28 ( ಕರ್ನಾಟಕ ವಾರ್ತೆ ) : ಬೆಳಕಿನ ಹಬ್ಬ ದೀಪಾವಳಿಯ ಸುಸಂದರ್ಭದಲ್ಲಿ ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಹಾರೈಸಿದ್ದಾರೆ.

ಅಜ್ಞಾನವೆಂಬ ಅಂಧಕಾರದಿಂದ ಸುಜ್ಞಾನದ ಬೆಳಕಿನತ್ತ ಪಯಣಿಸುವುದರ ಸಂಕೇತವೇ ದೀಪಾವಳಿ. ಮಣ್ಣಿಗೆ ವೃಷ್ಠಿಯ ಬೆಳಕು, ಹೆಣ್ಣಿಗೆ ಸೃಷ್ಠಿಯ ಬೆಳಕು ಹಾಗೂ ಕಣ್ಣಿಗೆ ದೃಷ್ಠಿಯ ಬೆಳಕು ಮುಖ್ಯ. ಬೆಳಕು ಇಲ್ಲದೆಯೇ ಈ ಜಗದಲ್ಲಿ ಬದುಕೇ ಇಲ್ಲ ! ಸದಾ ಕಾಲ ಸ್ನೇಹ ಮತ್ತು ಸೌಹಾರ್ಧದ ಹಾದಿ ತುಳಿದು ಎಲ್ಲರ ಬಾಳಲ್ಲಿ ಬೆಳಕು ತರುವ ಪ್ರಯತ್ನ ಮಾಡೋಣ. ಮನೆ-ಮನೆಯ ಮುಂದೆ ಮಣ್ಣಿನ ಹಣತೆಯ ಬೆಳಗಿ ಬೆಳಕು ಚೆಲ್ಲುವ ಪರಿಸರ-ಸ್ನೇಹಿ ದೀಪಾವಳಿಯ ಆಚರಿಸೋಣ, ಸಂಭ್ರಮಿಸೋಣ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Leave a Reply